ಅಗ್ನಿಶ್ಚಂದನಲೇಪೋ ವಿಷಮಮೃತಂ ಮರಣಮೇವ ಜೀವಾತು: /
ಸುಂದರಿ ವಿರಹಿಜನಾನಾಂ ಕಾಚನ ಲೋಕೋತ್ತರಾ ರೀತಿ: //
ಕನ್ನಡ ಅನುವಾದ
ಚಂದನದ ಲೇಪನವು ಅಗ್ನಿಯಂತೆ ಸುಡುತ್ತದೆ! ಅಮೃತವು ವಿಷದಂತೆ ಭಾಸವಾಗುತ್ತದೆ! ಜೀವಿಕೆಯು ಮರಣವೇ ಆಗಿದೆ! ಎಲೈ ಸುಂದರಿ! ವಿರಹಿಗಳ ರೀತಿ ಸ್ವಲ್ಪ ಲೋಕೋತ್ತರವಾಗಿರುತ್ತದೆ!'
ವಿರಹಿಗಳ ಚಿತ್ರಣವನ್ನು ಕವಿಯು ಮುಂದುವರೆಸುತ್ತಿದ್ದಾನೆ. ಅವರ ರೀತಿಗಳು ಲೋಕೋತ್ತರವಾಗಿರುತ್ತವೆ ಎನ್ನುತ್ತಾನೆ. ಇಲ್ಲಿ ಲೋಕೋತ್ತರ ಎಂದರೆ ವಿಲಕ್ಷಣ ಎಂದು ಅರ್ಥ. ಲೋಕದ ರೀತಿಗೆ ವಿರುದ್ಧ. ಸಾಮಾನ್ಯವಾಗಿ ಚಂದನದ ಲೇಪನವು ತಂಪಾಗಿದ್ದರೆ ವಿರಹಿಗಳಿಗೆ ಅದು ಅಗ್ನಿಯಂತೆ ಸುಡುತ್ತದೆ! ಅಮೃತವು ಜೀವವರ್ಧನೆ ಮಾಡುವ ಬದಲು ವಿಷದಂತೆ ಭಾಸವಾಗುತ್ತದೆ. ಜೀವಿಕೆಯು ಮರಣವೇ ಎನಿಸುತ್ತದೆ! ಇದನ್ನು ವಿರಹಿಣಿಯ ಸಖಿಯೇ ಅವಳಿಗೆ ಹೇಳುತ್ತಿರುವಂತಿದೆ. ಅಥವಾ ಕವಿಯೇ ಸುಂದರಿಗೆ ಹೇಳುತ್ತಿದ್ದಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ