ಸುಂದರಿ ಸಮುದಿತಶಶಿಕರಧೌತತಮಾ ನೇಯಮಷ್ಟಮೀ ರಾತ್ರಿ: /
ವಿರಹಿಜನಮಸಿತಭುಜಂಗೀ ವಿದೃಶ್ಯ ಪರಿವರ್ತಿತೋತ್ತಾನಾ //
ಕನ್ನಡ ಅನುವಾದ
' ಎಲೈ ಸುಂದರಿ! ಉದಿಸಿದ ಚಂದಿರನ ಕಿರಣಗಳಿಂದ ಅತ್ಯಂತ ಬೆಳ್ಳಗೆ ಉಜ್ವಲವಾಗಿರುವ ಈ ರಾತ್ರಿ ಅಷ್ಟಮಿಯ ಬೆಳದಿಂಗಳ ರಾತ್ರಿಯಲ್ಲ! ವಿರಹಿಗಳ ಪಾಲಿಗೆ ಇದು ಅವರನ್ನು ನೋಡಿ ಹೆಡೆಯೆತ್ತಿ ತಿರುಗಿಸಿದ ಮೈಯ ಕೃಷ್ಣಸರ್ಪವಾಗಿದೆ!'
ಇಲ್ಲಿ ಕವಿಯು ಸುಂದರವಾದ ಬೆಳದಿಂಗಳ ರಾತ್ರಿಯನ್ನು ಒಂದು ಕೃಷ್ಣಸರ್ಪಕ್ಕೆ ಹೋಲಿಸಿದ್ದಾನೆ. ಬೆಳದಿಂಗಳ ರಾತ್ರಿ ಕತ್ತಲಿನ ಜೊತೆಗೆ ಚಂದ್ರನ ಬಿಳಿಯ ಕಿರಣಗಳಿಂದ ಹೊಳೆಯುವ ಸುಂದರ ರಾತ್ರಿಯಾಗಿರುತ್ತದೆ. ಇದು ಶೃಂಗಾರ ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ಆದರೆ ವಿರಹಿಗಳ ಪಾಲಿಗೆ ಇದು ಬಾಧೆ ನೀಡುವ ರಾತ್ರಿಯಾಗಿರುತ್ತದೆ! ಇದು ಒಂದು ಕೃಷ್ಣಸರ್ಪದಂತೆ ಎನ್ನುತ್ತಾನೆ ಕವಿ. ವಿರಹಿಗಳನ್ನು ನೋಡಿದ ಕೂಡಲೇ ಹೆಡೆಯೆತ್ತಿ ಮೈ ತಿರುಗಿಸಿ ನಿಂತಿದೆ! ಅದರ ಮೈ ಕಪ್ಪಾಗಿದ್ದು ಅದರ ಒಳಭಾಗ ಬೆಳ್ಳಗಿದೆ. ಹಾಗಾಗಿ ಅದು ಕಪ್ಪು, ಬಿಳುಪುಗಳಿಂದ ಬೆಳದಿಂಗಳ ರಾತ್ರಿಗೆ ಹೋಲಿಕೆಯಾಗಿದೆ! ಹೀಗೆ ಆ ಬೆಳದಿಂಗಳ ಅಷ್ಟಮಿ ರಾತ್ರಿ, ಅಷ್ಟಮಿ ರಾತ್ರಿಯಲ್ಲದೇ ಹೆಡೆಯೆತ್ತಿ ಮೈತಿರುಗಿಸಿದ, ಕಚ್ಚಿ ಬಾಧಿಸುವ ಕೃಷ್ಣಸರ್ಪವಾಗಿದೆ ಎನ್ನುತ್ತಾ ಕವಿಯು ವಿರಹಿಗಳ ಪಾಲಿಗೆ ಅಂಥ ರಾತ್ರಿಯು ಎಷ್ಟು ಬಾಧೆ ನೀಡುತ್ತದೆ ಎಂದು ಸೂಚಿಸಿದ್ದಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ