ವಿರಹಾರ್ತಿದಲನಮೌಷಧಮೇಕಂ ಚೇಷ್ಟಾಸು ತಾಸು ತಾದಾತ್ಮ್ಯಮ್ /
ಸುಂದರಿ ಯಸ್ಮಿಞ್ಜಾತೇ ಬ್ರಹ್ಮಾನಂದೋsಪಿ ನಾಕಾಂಕ್ಷ್ಯ: //
ಕನ್ನಡ ಅನುವಾದ
' ಎಲೈ ಸುಂದರಿ! ವಿರಹದ ಬಾಧೆಯನ್ನು ನಾಶಮಾಡಲು ಇರುವ ಏಕೈಕ ಔಷಧವೆಂದರೆ ಪ್ರಿಯತಮನ ಪ್ರಣಯಕಲಾಪಗಳಲ್ಲಿ ತಾದಾತ್ಮ್ಯ ಹೊಂದುವುದು! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ!'
ಇದು ಸಖಿಯು ರಾಧೆಗೆ ಹೇಳುತ್ತಿರುವಂತಿದೆ. ಶ್ಲೋಕದ ಚಿತ್ರಣ ಹಾಗಿದೆ. ರಾಧೆಯ ಪ್ರಿಯತಮ ಶ್ರೀಕೃಷ್ಣನು ಅವಳನ್ನು ಬಿಟ್ಟು ಹೋಗಿದ್ದಾನೆ ಹಾಗೂ ಅವಳಿಗೆ ವಿರಹಬಾಧೆ ಕಾಡುತ್ತಿದೆ. ಆಗ ಅವಳ ಸಖಿ ಅವಳಿಗೆ ಈ ಮಾತನ್ನು ಹೇಳುತ್ತಿರುವಂತಿದೆ. ಅವಳು ಹೇಳುವಂತೆ ವಿರಹಬಾಧೆಯನ್ನು ಹೋಗಲಾಡಿಸಲು ಇರುವುದು ಒಂದೇ ಔಷಧಿ. ಅದೇನೆಂದರೆ ಪ್ರಿಯತಮನ ಪ್ರಣಯಚೇಷ್ಟೆಗಳನ್ನು, ಪ್ರಣಯಲೀಲೆಗಳನ್ನು ಸ್ಮರಿಸಿಕೊಳ್ಳುತ್ತಾ ಅವುಗಳಲ್ಲೇ ತಾದಾತ್ಮ್ಯ ಹೊಂದುವುದು. ಆಗ ಅವನೇ ಪ್ರಕಟವಾದಂತಾಗುತ್ತದೆ! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ. ಹೌದಲ್ಲವೇ? ಶ್ರೀಕೃಷ್ಣನು ಸಾಕಾರ ಪರಬ್ರಹ್ಮನೇ ಆಗಿದ್ದಾನೆ. ಅವನ ಸಾಕಾರ ಶೃಂಗಾರ ಪ್ರೇಮದ ಆನಂದದ ಮುಂದೆ ನಿರಾಕಾರ ಬ್ರಹ್ಮಾನಂದ ರುಚಿಸುವುದೇ ಇಲ್ಲ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ