ಆಸಾರಸ್ನಪಿತೇ ಯತ್ಪ್ರಯಾಸಿ ಪಥಿ ದುಸ್ತರೇ ಪಯೋದಜಲೈ: /
ಪ್ರಾಕ್ತನಮುದವಾಸತಪ: ಫಲೋನ್ಮುಖಂ ಕಸ್ಯಚಿತ್ಕೃತಿನ: //
ಕನ್ನಡ ಅನುವಾದ
' ಎಲೈ ಸುಂದರಿ! ಮಳೆಯಲ್ಲಿ ಸಂಪೂರ್ಣ ನೆನೆದು ಮೇಘಗಳ ಜಲದಿಂದ ದುಸ್ತರವಾಗಿರುವ ಪಥದಲ್ಲಿ ನೀನು ಪಯಣಿಸುತ್ತಿರುವೆಯಲ್ಲ! ಇಂಥ ಪುಣ್ಯಫಲವನ್ನು ಅನುಭವಿಸಲು ಆ ನಿನ್ನ ಪ್ರಿಯತಮನು ಪೂರ್ವಜನ್ಮದಲ್ಲಿ ಜಲದಲ್ಲಿ ನಿಂತು ತಪಸ್ಸು ಮಾಡಿದ ಯಾರೋ ಪುಣ್ಯಾತ್ಮನಿರಬೇಕು!'
ಪುನಃ ಇಲ್ಲಿ ಒಬ್ಬ ಅಭಿಸಾರಿಕೆಗೆ ಅವಳ ಸಖಿ ಅಥವಾ ಕವಿ ಹೇಳುತ್ತಿರುವ ಸ್ವಾರಸ್ಯಕರ ಮಾತಿದೆ. ಇಲ್ಲಿ ಒಬ್ಬ ಅಭಿಸಾರಿಕೆ ಜೋರಾಗಿ ಮಳೆ ಸುರಿಯುತ್ತಿದ್ದರೂ ಮೈಯೆಲ್ಲಾ ನೆನೆಯುತ್ತಿದ್ದರೂ ದಾರಿಯು ಮಳೆನೀರಿನಿಂದ ಕೊಚ್ಚೆಯಾಗಿ ನಡೆಯಲು ಕಷ್ಟವಾಗಿದ್ದರೂ ಲೆಕ್ಕಿಸದೆ ತನ್ನ ಪ್ರಿಯತಮನನ್ನು ಭೇಟಿಯಾಗಲು ಹೋಗುತ್ತಿದ್ದಾಳೆ! ಇಂಥ ಕಷ್ಟದಲ್ಲೂ ಅವಳು ಹೋಗುತ್ತಿರುವಳೆಂದರೆ, ಅವಳು ಅವನನ್ನು ಅಷ್ಟು ಗಾಢವಾಗಿ ಪ್ರೀತಿಸುತ್ತಿದ್ದಾಳೆ! ಇಂಥ ಪ್ರೀತಿಯನ್ನು ಪಡೆಯಲು ಅವಳ ಆ ಪ್ರಿಯತಮನು ನಿಜಕ್ಕೂ ಪುಣ್ಯಶಾಲಿ! ಇಂಥ ಪ್ರೀತಿಯನ್ನು ಪಡೆಯಲು ಅವನು ತನ್ನ ಹಿಂದಿನ ಜನ್ಮದಲ್ಲಿ ನೀರಿನಲ್ಲಿ ನಿಂತು ತಪಸ್ಸು ಮಾಡಿರಬೇಕು ಎಂದು ನಾಯಕಿಗೆ ಅವಳ ಸಖಿ ಅಥವಾ ಕವಿ ಹೇಳುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ