ದ್ವಿಗುಣೀಕೃತಾಂಧತಮಸಂ ವರ್ಷತಿ ರುದ್ಧಾನಿಲಂ ಪಯೋವಾಹೇ /
ಆಕಸ್ಮಿಕಮಾಗಮನಂ ಕಾಂತ್ಯಾನುಮಿತಂ ಸಖೇ ತಸ್ಯಾ: //
ಕನ್ನಡ ಅನುವಾದ
ನಾಯಕನು ತನ್ನ ಸ್ನೇಹಿತನಿಗೆ ಹೇಳುತ್ತಾನೆ," ಹೇ ಸಖ! ಮೇಘಗಳು ಗಾಳಿಯನ್ನು ತಡೆದು ಮಳೆ ಸುರಿಸುತ್ತಾ ಕತ್ತಲನ್ನು ದ್ವಿಗುಣೀಕರಿಸಿದೆ! ಇಂಥ ಸಮಯದಲ್ಲಿ, ನನ್ನ ಪ್ರಿಯತಮೆಯು ಆಕಸ್ಮಿಕವಾಗಿ ಆಗಮಿಸಲು, ಅವಳ ಕಾಂತಿಯಿಂದಲೇ ಅವಳ ಆಗಮನವನ್ನು ನಾನು ಊಹಿಸಿದೆ!"
ಮಳೆ ಸುರಿಸುತ್ತಾ ಮೇಘಗಳು ಗಾಳಿಯನ್ನು ತಡೆದು ಕತ್ತಲನ್ನು ಹೆಚ್ಚಿಸುತ್ತಿದೆ! ನಾಯಕನು ತನ್ನ ಸ್ನೇಹಿತನೊಂದಿಗೆ ಒಂದು ಕಡೆ ನಿಂತಿದ್ದಾನೆ. ಅದು ಅವನಿಗೂ ನಾಯಕಿಗೂ ನಿತ್ಯ ಭೇಟಿಯ ಸಂಕೇತಸ್ಥಳವಿರಬಹುದು. ಆದರೆ ನಾಯಕನು ನಾಯಕಿಗೆ ಬರಲು ಹೇಳಿಲ್ಲ. ಆದರೂ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ! ಆದರೆ ಕತ್ತಲು ಎಷ್ಟಿದೆಯೆಂದರೆ ಅವಳು ಕಾಣಿಸುತ್ತಲೇ ಇಲ್ಲ! ಆದರೂ ನಾಯಕನು ಅವಳು ಬಂದುದನ್ನು ಊಹಿಸಿದ್ದಾನೆ! ಹೇಗೆಂದರೆ ಅವಳ ಕಾಂತಿಯಿಂದ! ಅದನ್ನು ತನ್ನ ಸ್ನೇಹಿತನಿಗೆ ಹೇಳುತ್ತಿದ್ದಾನೆ. ಇಲ್ಲಿ ಸ್ವಲ್ಪ ಉತ್ಪ್ರೇಕ್ಷೆಯಿದ್ದರೂ ನಾಯಕಿಯ ಕಾಂತಿ ಅಂಥ ದಟ್ಟ ಕತ್ತಲಿನಲ್ಲೂ ಪ್ರಕಾಶಿಸುತ್ತಾ ನಾಯಕನಿಗೆ ಅವಳ ಆಗಮನದ ವಿಷಯ ತಿಳಿಯುತ್ತಿದೆ ಎನ್ನುವುದರ ಮೂಲಕ ಅವಳ ಸೌಂದರ್ಯವನ್ನು ಕವಿಯು ಪ್ರಶಂಸಿಸುತ್ತಿದ್ದಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ