ಸುರತಸುಖೈಕನಿಧಾನಂ ಸುಂದರಿ ಜಘನಸ್ಥಲಂ ಜಯತಿ//
' ಎಲೈ ಸುಂದರಿ! ವಿಪರೀತ ರತಯಲ್ಲಿ ನಿನಗಾದ ಪ್ರಯಾಸದಿಂದ ಉಂಟಾದ ಪುಳಕದಿಂದ ವಿಸ್ತರಿಸಿದ ಹಾಗೂ ಮಾಂಸಲವಾದ, ತುಂಬಿಕೊಂಡ, ಸುರತಸುಖಕ್ಕೆ ಏಕೈಕ ನಿಧಿಯಾಗಿರುವ ನಿನ್ನ ಜಘನಸ್ಥಲವು ವಿಜಯಶಾಲಿಯಾಗುತ್ತದೆ!'
ವಿಪರೀತ ರತಿಯೆಂದರೆ ಸ್ತ್ರೀಯು ಪುರುಷನ ಮೇಲಿದ್ದು ಕ್ರೀಡಿಸುವ ಭಂಗಿ. ಇದನ್ನು ಪುರುಷಾಯಿತ ಎಂದೂ ಕರೆಯುತ್ತಾರೆ. ವಾತ್ಸ್ಯಾಯನನ ಕಾಮಸೂತ್ರದಲ್ಲಿ ಇದರ ವಿವರಣೆ ಇದೆ ಹಾಗೂ ಸಂಸ್ಕೃತದ ಅನೇಕ ಶೃಂಗಾರ ಪದ್ಯಗಳಲ್ಲಿ ಪುರುಷಾಯಿತದ ವರ್ಣನೆಯಿದೆ. ಅನೇಕ ದೇವಾಲಯ ಶಿಲ್ಪಗಳಲ್ಲೂ ನಾವು ಪುರುಷಾಯಿತದ ಚಿತ್ರಣ ಕಾಣಬಹುದು. ಪ್ರಾಚೀನ ಭಾರತೀಯರಿಗೆ ಪುರುಷಾಯಿತದ ಆಚರಣೆ ಹಾಗೂ ವರ್ಣನೆಗಳ ವಿಷಯದಲ್ಲಿ ಮುಜುಗರವಿರಲಿಲ್ಲ. ರತಿಕ್ರೀಡೆ ಹಾಗೂ ಪ್ರೇಮಕಲಾಪಗಳಲ್ಲಿ ಪುರುಷರಿಗಿದ್ದಷ್ಟೇ ಸ್ವಾತಂತ್ರ್ಯ ಸ್ತ್ರೀಯರಿಗೂ ಇತ್ತು.
ಈ ಭಂಗಿಯಲ್ಲಿ ಸುಂದರಿಗೆ ಆಗುವ ಪ್ರಯಾಸ, ಪುಳಕಗಳಿಂದ ಅವಳ ಜಘನವು ವಿಸ್ತರಿಸಿ, ಮಾಂಸಲವಾಗಿ, ತುಂಬಿಕೊಂಡಂತೆ ಬಹು ಸುಂದರವಾಗಿ ಕಾಣುತ್ತಿದೆ, ಹಾಗೂ ಅದು ಸುರತಸುಖಕ್ಕೆ ಏಕೈಕ ನಿಧಿಯಾಗಿದೆ ಎಂದು ಕವಿಯು ವರ್ಣಿಸುತ್ತಾ ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ