ಸರಳವಾದ ಒಂದೇ ವಾಕ್ಯದಲ್ಲಿ ಈ ಒಗಟು ರಾಮಾಯಣದ ಕಥೆಯನ್ನೇ ಹೇಳುತ್ತದೆ. ಕಂದ, ಎಂದರೆ ಬಾಲ ರಾಮನು ಹುಟ್ಟಿ ಬಂದ, ರಾವಣನನ್ನು ಕೊಂದ, ಸೀತೆಯನ್ನು ಹಿಂದಕ್ಕೆ ಕರೆತಂದ.
ಮಕ್ಕಳ ಕಣ್ಣಾಮುಚ್ಚಾಲೆ ಆಟದ ಈ ಸರಳ ಪದ್ಯದಲ್ಲಿ ರಾಮಾಯಣದ ಕಥೆ ಅಡಗಿದೆ. ಕಣ್ಣಾ ಮುಚ್ಚೆ ಅಂದರೆ ದಶರಥನು ಕಣ್ಣು ಮುಚ್ಚಲು, ಅಂದರೆ ಮರಣ ಹೊಂದಲು, ಕಾಡೇ ಗೂಡೆ, ಅಂದರೆ ರಾಮ, ಲಕ್ಷ್ಮಣ, ಸೀತೆಯರಿಗೆ ಕಾಡೇ ಗೂಡಾಯಿತು, ಅಂದರೆ ಮನೆಯಾಯಿತು. ಉದ್ದಿನ ಮೂಟೆ ಉರುಳೇಹೋಯ್ತು, ಅಂದರೆ ಉದ್ದಿನ ಮೂಟೆಯಂತೆ ಕೊಬ್ಬಿ ಉಬ್ಬಿದ್ದ ರಾವಣ ಸತ್ತು ಬಿದ್ದ. ನಮ್ಮ ಹಕ್ಕಿ ಬಿಟ್ಟೆವು ನಿಮ್ಮ ಹಕ್ಕಿ ಬಿಟ್ಟೆವು, ಅಂದರೆ ನಮ್ಮ ಹಕ್ಕಿ ಎಂದು ಭಾವಿಸಿದ್ದ ನಿಮ್ಮ ಹಕ್ಕಿ ಸೀತೆಯನ್ನು ಬಿಟ್ಟೆವು, ಅಂದರೆ ಸೀತೆಯನ್ನು ಗೌರವದಿಂದ ಕಳಿಸಿಕೊಡುತ್ತೇವೆ ಎಂದು ವಿಭೀಷಣ ಹೇಳುವುದು.
೩ ಹತ್ತುತಾ ಕೆಂಪು, ಆರುತಾ ಕಪ್ಪು, ಅದರ ಮಿತ್ರನ ಮಗನ ಒಡೆಯನ ವೈರಿಯ ಹೆಂಡತಿಯ ಹುಟ್ಹೆಸರೇನು?
ಇದೊಂದು ಸಂಕೀರ್ಣ ಒಗಟು. ಹತ್ತುತಾ ಕೆಂಪು ಆರುತಾ ಕಪ್ಪು ಅಂದರೆ ಬೆಂಕಿ. ಅದರ ಮಿತ್ರ ಅಂದರೆ ಗಾಳಿ ಅಥವಾ ವಾಯು. ಮಿತ್ರನ ಮಗ ಅಂದರೆ ವಾಯುಪುತ್ರ ಹನುಮಂತ. ಅವನ ಒಡೆಯ ಅಂದರೆ ರಾಮ. ಅವನ ವೈರಿ ಅಂದರೆ ರಾವಣ. ಅವನ ಹೆಂಡತಿಯ ಹುಟ್ಹೆಸರು ಮಂಡೋದರಿ.
೪. ಹತೋ ಹನುಮತಾ ರಾಮ: ಸೀತಾ ಹರ್ಷಮುಪಾಗತಾ /
ರುದಂತಿ ರಾಕ್ಷಸಾ: ಸರ್ವೇ ಹಾ ಹಾ ರಾಮೋ ಹತೋ ಹತ: //
ಇದೊಂದು ಸಂಸ್ಕೃತದ ಕೂಟ ಸಮಸ್ಯೆ. ಮೇಲ್ನೋಟಕ್ಕೆ ಒಂದು ಆರ್ಥ ಕಂಡರೆ ಪದಗಳನ್ನು ಬೇರೆ ರೀತಿಯಲ್ಲಿ ಸೇರಿಸಿದಾಗ ಅಥವಾ ಬಿಡಿಸಿದಾಗ ಬೇರೆ ಅರ್ಥ ಬರುತ್ತದೆ. ಮೇಲ್ನೋಟಕ್ಕೆ ಕಾಣುವ ಅರ್ಥ ಹೀಗಿದೆ -
ಹನುಮಂತನಿಂದ ರಾಮನು ಹತನಾಗಲು, ಅಂದರೆ ಕೊಲ್ಲಲ್ಪಡಲು ( ಹತೋ ಹನುಮತಾ ರಾಮ:), ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ,' ಹಾ! ಹಾ! ರಾಮನು ಹತನಾದ!' ಎಂದು ಅಳತೊಡಗಿದರು!
ವಿಚಿತ್ರ ಅರ್ಥವಲ್ಲವೇ? ಇದು ಹೇಗೆ ಸಾಧ್ಯ? ಹನುಮತಾ ರಾಮ: ಎನ್ನುವುದನ್ನು ಹನುಮತಾರಾಮ: ಎಂದು ಸೇರಿಸಿ ಹನುಮತಾ ಆರಾಮ: ಎಂದು ಬಿಡಿಸಿಕೊಂಡರೆ ಹತೋ ಹನುಮತಾ ಆರಾಮ: ಎಂದಾಗುತ್ತದೆ. ಆರಾಮ ಅಂದರೆ ಉದ್ಯಾನವನ. ಆಗ ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು ಎಂದಾಗುತ್ತದೆ. ಪುನಃ ಹಾರಾಮ ಎಂದು ಸೇರಿಸಿ, ಹಾ ಆರಾಮ ಎಂದು ಬಿಡಿಸಿದರೆ ರಾಕ್ಷಸರು ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು ಎಂದು ಅಳುತ್ತಾರೆ ಎಂಬ ಅರ್ಥ ಬರುತ್ತದೆ. ಈಗ ಶ್ಲೋಕದ ಅರ್ಥ ಹೀಗಾಗುತ್ತದೆ -
ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು, ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ ' ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು!' ಎಂದು ಅಳತೊಡಗಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ