ಕಾಕವಿಷ್ಠಾಸಮುತ್ಪನ್ನ: ಪಂಚೈತೇsತಿಪವಿತ್ರಕಾ: //
' ಉಚ್ಚಿಷ್ಟ ( ಎಂಜಲು),:ಶಿವನಿರ್ಮಾಲ್ಯ ( ಶಿವನ ತಲೆಯಿಂದ ಬಿದ್ದುದು), ವಾಂತಿ, ಶವದ ಮೇಲಿನ ಬಟ್ಟೆ, ಮತ್ತು ಕಾಗೆಯ ಮಲದಿಂದ ಹುಟ್ಟಿದುದು - ಈ ಐದೂ ಅತಿ ಪವಿತ್ರವಾದ ವಸ್ತುಗಳು!'
ಮೇಲ್ನೋಟಕ್ಕೆ ಇಲ್ಲಿ ಹೇಳಿರುವುದೆಲ್ಲವೂ ಅಪವಿತ್ರವಾದ ವಸ್ತುಗಳೆಂದು ಕಾಣುತ್ತವೆ. ಆದರೆ ಇದೊಂದು ಒಗಟು.ಹಾಗಾಗಿ ಬೇರೇನೋ ಇರಬೇಕೆಂದು ಯೋಚಿಸಬೇಕು. ಮೊದಲನೆಯದಾಗಿ ಉಚ್ಚಿಷ್ಟ ಅಥವಾ ಎಂಜಲೆಂದರೆ ಕರುವು ಹಸುವಿನ ಕೆಚ್ಚಲಿನಿಂದ ಕುಡಿದ ಬಳಿಕ ಕರೆದುಕೊಳ್ಳುವ ಹಾಲು.ಅದು ಎಂಜಲಾದರೂ ಪವಿತ್ರವಲ್ಲವೇ? ಶಿವನಿರ್ಮಾಲ್ಯ ಅಥವಾ ಶಿವನ ತಲೆಯಿಂದ ಬಿದ್ದುದು ಗಂಗೆ. ಅದು ಪವಿತ್ರವಲ್ಲವೇ? ವಾಂತಿ ಎಂದರೆ ಜೇನುತುಪ್ಪ. ಹಲವು ಹೂವುಗಳಿಂದ ಮಕರಂದವನ್ನು ಹೀರಿ ಗೂಡಿಗೆ ಬಂದು, ಹೊಟ್ಟೆಯಲ್ಲಿ ಜೇನಾಗಿ ಪರಿವರ್ತಿತವಾಗುವ ರಸವನ್ನು ಜೇನ್ನೊಣಗಳು ಬಾಯಿಂದ ಹೊರಹಾಕಿ ಸಂಗ್ರಹಿಸುವ ಜೇನುತುಪ್ಪ ವಾಂತಿಯಲ್ಲದೇ ಇನ್ನೇನು? ಆದರೆ ಎಲ್ಲಾ ದೇವಕಾರ್ಯ, ಅಭಿಷೇಕಗಳಿಗೆ ಅದನ್ನು ಪವಿತ್ರವೆಂದು ಬಳಸುವುದಿಲ್ಲವೇ? ಶವದ ಮೇಲಿನ ಬಟ್ಟೆ ಎಂದರೆ ರೇಶ್ಮೆ ವಸ್ತ್ರ. ರೇಶ್ಮೆ ಹುಳು ಪತಂಗವಾಗಲೆಂದು ತನ್ನ ಸುತ್ತಲೂ ಗೂಡು ಕಟ್ಟಿಕೊಳ್ಳಲು, ಆ ಗೂಡನ್ನು ಬಿಸಿನೀರಿನಲ್ಲಿ ಹಾಕಿ ಎಳೆಯುವ ರೇಶ್ಮೆ ದಾರ ಶವದ ಮೇಲಿನ ಬಟ್ಟೆಯಲ್ಲದೇ ಇನ್ನೇನು? ಆದರೆ ಆ ರೇಶ್ಮೆ ವಸ್ತ್ರವನ್ನು ಸಕಲ ದೇವಪೂಜೆಗಳಲ್ಲಿ ಪವಿತ್ರವೆಂಬಂತೆ ಬಳಸುತ್ತಾರೆ. ಇನ್ನು ಕಾಗೆಯ ಮಲದಿಂದ ಹುಟ್ಟಿದುದು ಎಂದರೆ ಅರಳೀಮರ. ಕಾಗೆಯು ಅರಳೀಮರದ ಹಣ್ಣುಗಳನ್ನು ತಿಂದು ಅದರ ಬೀಜಗಳನ್ನು ಮಲದಲ್ಲಿ ವಿಸರ್ಜಿಸಲು, ಆ ಬೀಜಗಳಿಂದ ಹುಟ್ಟುವ ಅರಳೀಮರ, ಕಾಗೆಯ ಮಲದಿಂದ ಹುಟ್ಟಿದಂತೆಯೇ ಆಯಿತಲ್ಲವೇ? ಆದರೆ ಆ ಅರಳೀಮರದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ಎಲ್ಲರೂ ಅದರ ಪ್ರದಕ್ಷಿಣೆ ಮಾಡುತ್ತಾರೆ. ಹೀಗೆ ಅದು ಬಹಳ ಪವಿತ್ರ.
ಹೀಗೆ ಮೇಲ್ನೋಟಕ್ಕೆ ಪವಿತ್ರ ಎನಿಸುವ ಎಷ್ಟೋ ವಸ್ತುಗಳು ಅಪವಿತ್ರದ ಮೂಲದ್ದೆನಿಸಬಹುದು. ಹಾಗಾಗಿ ನಾವು ವಸ್ತುಗಳ ಉಪಯುಕ್ತತೆ ನೋಡುವಾಗ ಅವುಗಳ ಮೂಲದ ಬಗ್ಗೆ ಬೇಸರಿಸಿಕೊಳ್ಳಬಾರದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ