ಗುರುವಾರ, ಏಪ್ರಿಲ್ 23, 2026

ಸುಂದರೀಶತಕ -೨೮


ಸಂಸ್ಕೃತ ಮೂಲ 

ಕುಸುಮಶರನೃಪನಿದೇಶಾತ್ಸುತನೌ ಚಕಿತಂ ನವಂ ವಯೋ ವಿಶತಿ /
ನವಸೇವಕ ಇವ ಪಾರ್ಥಿವಸದ್ಮನಿ ದತ್ತಪ್ರವೇಶೋsಪಿ //

ಕನ್ನಡ ಅನುವಾದ 

     ' ಕಾಮದೇವರಾಜನ ಆಜ್ಞಾನುಸಾರ, ಈ ಸುಂದರಿಯ
 ಶರೀರದಲ್ಲಿ ಯೌವನವು ಭಯಗೊಂಡು ಹೇಗೆ ಪ್ರವೇಶಿಸುತ್ತಿದೆಯೆಂದರೆ, ರಾಜನ ಅರಮನೆಯೊಳಗೆ ಹೋಗಲು ಅನುಮತಿ ಸಿಕ್ಕರೂ ಹೊಸ ಸೇವಕನು ನಿಧಾನವಾಗಿ ಹೆದರುತ್ತಾ ಒಳಗೆ ಹೋಗುವ ಹಾಗೆ ಪ್ರವೇಶಿಸುತ್ತಿದೆ!'
    ಕವಿಯು ಹೆಣ್ಣಿನ ದೇಹದಲ್ಲಿ ಯೌವನದ ಆಗಮನವನ್ನು ಸ್ವಾರಸ್ಯಕರವಾಗಿ ವರ್ಣಿಸುತ್ತಿದ್ದಾನೆ! ಅದು ಮಹಾರಾಜ ಕಾಮದೇವನ ಆಜ್ಞೆಯಂತೆ ಅವಳ ದೇಹವನ್ನು ಪ್ರವೇಶಿಸುತ್ತಿದೆ. ಆದರೆ ಅದು ಹೇಗಿದೆಯೆಂದರೆ, ಒಬ್ಬ ಹೊಸ ಸೇವಕನಿಗೆ ರಾಜನ ಅರಮನೆಯೊಳಗೆ ಪ್ರವೇಶಿಸಲು ಅನುಮತಿ ಸಿಕ್ಕರೂ ಅರಮನೆಯ ವೈಭವವನ್ನು ನೋಡಿ, ಅವನು ನಿಧಾನವಾಗಿ ಹೆದರುತ್ತಾ ಬರುವಂತೆ, ಯೌವನವೂ ಭಯಗೊಂಡು ನಿಧಾನವಾಗಿ ಬರುತ್ತಿದೆ! ಈ ಸಮಯದಲ್ಲಿ ಹುಡುಗಿಗೆ ಆಗುವ ಸಂಕೋಚ, ನಾಚಿಕೆ, ಇತ್ಯಾದಿಗಳು ಇದನ್ನು ತೋರಿಸುತ್ತವೆ.' 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ