ಶನಿವಾರ, ಏಪ್ರಿಲ್ 11, 2026

ಸುಂದರೀಶತಕ -೨೦

ಸಂಸ್ಕೃತ ಮೂಲ 

ಇಂದೋರಖಂಡಮಂಡಲನಿರ್ಯತ್ಪೀಯೂಷಮೃಷ್ಟರಸನೋ ಯ: /
ಅಧರದಲಂ ತವ ಸುಂದರಿ ವರ್ಣಯಿತುಂ ಕಲ್ಪತೇ ಯದಿ ಸ: //

ಕನ್ನಡ ಅನುವಾದ 

    ' ಎಲೈ ಸುಂದರಿ! ಯಾವ ಕವಿಯ ನಾಲಿಗೆ ಅಖಂಡ ಚಂದ್ರಮಂಡಲದಿಂದ ಸೂಸುತ್ತಿರುವ ಅಮೃತದಿಂದ ತೋಯಿಸಲ್ಪಟ್ಟಿದೆಯೋ, ಅವನು ನಿನ್ನ ಅಧರದಳದ ವರ್ಣನೆ ಮಾಡಬಲ್ಲನು.'
      ಹೆಣ್ಣಿನ ಸೌಂದರ್ಯವನ್ನು ವರ್ಣನೆ ಮಾಡಬೇಕೆಂದರೂ ಕವಿಗೆ ಸೌಂದರ್ಯದ ಸವಿಯ ಅನುಭವ ಬೇಕು! ಎಲ್ಲರಿಗೂ ಹೆಣ್ಣಿನ ಸೌಂದರ್ಯದ ವರ್ಣನೆ ಮಾಡಲಾಗುವುದಿಲ್ಲ! ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬಂತೆ, ಹೆಣ್ಣಿನ ಸೌಂದರ್ಯದ ಸವಿಯನ್ನು ಬಲ್ಲವನೇ ಬಲ್ಲ! ಅದನ್ನು ವರ್ಣಿಸಲು ಆ ಸೌಂದರ್ಯಕ್ಕೆ ಸಮಾನವಾದ ಸೌಂದರ್ಯವನ್ನು ಸವಿದಿರಬೇಕು. ಹೆಣ್ಣು ಪ್ರಕೃತಿಯಷ್ಟೇ ಸುಂದರ ಹಾಗೂ ಕೋಮಲ! ಹಾಗಾಗಿ ಆ ಪ್ರಕೃತಿಯ ಸೌಂದರ್ಯವನ್ನು ಸವಿದವನು ಹೆಣ್ಣಿನ ಸೌಂದರ್ಯವನ್ನು ಸವಿದು ವರ್ಣಿಸಬಲ್ಲ! ಇಲ್ಲಿ ಹೆಣ್ಣಿನ ಕೋಮಲವಾದ, ಮಧುರವಾದ ಅಧರದಳದ ಸೌಂದರ್ಯವನ್ನು ವರ್ಣಿಸಬಲ್ಲವನು ಚಂದ್ರನಿಂದ ಒಸರುತ್ತಿರುವ ಸುಧೆಯನ್ನು ಸವಿದವನು ಮಾತ್ರ ಎನ್ನುವ ಮೂಲಕ ಹೆಣ್ಣಿನ ಅಧರ ಆ ಚಂದ್ರನ ಸುಧೆಯಷ್ಟೇ ಮಧುರ ಎಂದು ಕವಿಯು ಹೇಳುತ್ತಾನೆ.
     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ