ಸೀಮಂತಿನಿ ತವ ಕುಟಿಲಸ್ನಿಗ್ಧಾಯತಮೇಚಕ: ಕಟಾಕ್ಷ ಇವ / ಹಾ ಹಂತ ಕೇಶಹಸ್ತೋ ಹೃದಯಂ ಹಸ್ತಾದ್ವಿಹಸ್ತಯತಿ //
ಕನ್ನಡ ಅನುವಾದ
' ಸುಂದರ ಕೇಶದ ಸುಂದರಿ! ನಿನ್ನ ಕೇಶಹಸ್ತವು ( ಕೇಶಪಾಶ) ನಿನ್ನ ಕಡೆಗಣ್ಣ ಕುಡಿನೋಟದಂತೆ ಕುಟಿಲವೂ ಸ್ನಿಗ್ಧವೂ ಉದ್ದವಾಗಿಯೂ ಕಡುಕಪ್ಪಾಗಿಯೂ ಇದ್ದು, ಅಯ್ಯೋ! ನನ್ನ ಹೃದಯವನ್ನು ನನ್ನ ಹಸ್ತದಿಂದ ವಿಹಸ್ತಗೊಳಿಸುತ್ತಿದೆ!'
ಇಲ್ಲಿ ಕವಿಯು ಹೆಣ್ಣಿನ ಕೇಶಪಾಶವನ್ನು ಅವಳ ಕಟಾಕ್ಷ ಅಥವಾ ಕಡೆಗಣ್ಣ ಕುಡಿನೋಟಕ್ಕೆ ಹೋಲಿಸಿದ್ದಾನೆ. ಹಾಗಾಗಿ ಅವಳ ಕೇಶಪಾಶವು ಅವಳ ಕಟಾಕ್ಷದಂತೆ ಕುಟಿಲವೂ ( ವಕ್ರವೂ) ಸ್ನಿಗ್ಧವೂ ( ಕೋಮಲ ಹಾಗೂ ತೈಲಯುಕ್ತ ಹಾಗೂ ಸ್ನೇಹಯುಕ್ತ), ಉದ್ದವಾಗಿಯೂ ಕಡುಕಪ್ಪಾಗಿಯೂ ಇದೆ! ಇಂಥ ಸುಂದರ ಕೇಶಪಾಶವು ಹಸ್ತದಂತಿದ್ದು, ನನ್ನ ಹಸ್ತದಿಂದ ನನ್ನ ಹೃದಯವನ್ನು ಅಪಹರಿಸುತ್ತಾ ಅದನ್ನು ವಿಹಸ್ತಗೊಳಿಸುತ್ತಿದೆ ಎಂದು ಉತ್ಪ್ರೇಕ್ಷೆಯಿಂದ ಕವಿಯು ಅವಳ ಕೇಶವನ್ನು ವರ್ಣಿಸುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ