ವದನಮಿದಮಮೃತಮಯಮಿತಿ ನ ತರ್ಕಿತಂ ಕಿಂ ತು ತತ್ಪ್ರಮಿತಮ್ /
ಮುಗ್ಧೇ ದಗ್ಧರತಿಪ್ರಿಯಜೀವನಮೇವ ಪ್ರಮಾಣಮಿಹ //
ಕನ್ನಡ ಅನುವಾದ
' ಎಲೈ ಮುಗ್ಧೆ! ನಿನ್ನ ಮುಖವು ಅಮೃತಮಯವಾಗಿದೆಯೆಂದು ತರ್ಕ ಮಾಡುವುದಲ್ಲ; ಅದು ಪ್ರಮಾಣಸಹಿತವಾಗಿ ಸಿದ್ಧವಾಗಿದೆ! ರತಿಪ್ರಿಯನಾದ ಮನ್ಮಥನು ದಗ್ಧನಾದ ಬಳಿಕ ಪುನಃ ಆ ನಿನ್ನ ಮುಖದಿಂದಲೇ ಜೀವಿತನಾದುದೇ ಪ್ರಮಾಣ!'
ಶಿವನ ತಪಸ್ಸು ಕೆಡಿಸಲು ಹೋಗಿ ಅವನ ಮೂರನೆಯ ಕಣ್ಣಿನಿಂದ ಸುಡಲ್ಪಟ್ಟ ಕಾಮದೇವನು, ಹಾಗೆ ದಗ್ಧನಾದ ಬಳಿಕವೂ ಸುಂದರಿಯ ಮುಖದಿಂದ ಪುನಃ ಜೀವಿತನಾಗುತ್ತಾನೆ! ಹಾಗಾಗಿ ಅದು ಅಮೃತಮಯವಾಗಿದೆಯೆಂದು ಪ್ರಮಾಣಸಿದ್ಧವಾಗಿದೆಯೆಂದು ಹೇಳುತ್ತಾ ಮನ್ಮಥನನ್ನೇ ಜೀವಂತಗೊಳಿಸುವಷ್ಟು ಸುಂದರವಾಗಿದೆಯೆಂದು ಕವಿಯು ಹೆಣ್ಣಿನ ಮುಖವನ್ನು ವರ್ಣಿಸುತ್ತಾನೆ.
good description of beauty by the poet
ಪ್ರತ್ಯುತ್ತರಅಳಿಸಿ