ಶುಕ್ರವಾರ, ಏಪ್ರಿಲ್ 17, 2026

ಸುಂದರೀಶತಕ -೨೫

ಸಂಸ್ಕೃತ ಮೂಲ 

ತವ ನಿರ್ಮಲೌ ಕಪೋಲೌ ಸೌಂದರ್ಯಸಾರಸುಂದರಾಭೋಗೌ /
ಕಿಂ ವರ್ಣಯಾಮಿ ಸುಂದರಿ ಚುಂಬನಯೋಗ್ಯಾಕೃತೀ ಕೃತಿನ: //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ನಿರ್ಮಲ ಕಪೋಲಗಳು ಸೌಂದರ್ಯಸಾರದಿಂದ ಸುಂದರವಾಗಿ ಪರಿಪೂರ್ಣವಾಗಿವೆ! ನಾನೇನು ವರ್ಣಿಸಲಿ? ಅವು ಭಾಗ್ಯಶಾಲಿಯೊಬ್ಬನ ಚುಂಬನಕ್ಕೆ ಯೋಗ್ಯವಾದ ಆಕೃತಿಯುಳ್ಳ ಕೆನ್ನೆಗಳಾಗಿವೆ!' 
      ಸುಂದರಿಯ ಕಪೋಲಗಳು ಎಷ್ಟು ಸುಂದರವಾಗಿವೆಯೆಂದರೆ ಕವಿಗೆ ಅವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ! ಇಂಥ ವರ್ಣನಾತೀತವಾದ ಕೆನ್ನೆಗಳಿಗೆ ಭಾಗ್ಯಶಾಲಿಯೊಬ್ಬನ ಚುಂಬನದ ಬಹುಮಾನವೇ ಸರಿ ಎನ್ನುತ್ತಾನೆ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ