ಯಸ್ಯ ಸ್ವರೇಣ ವಿಜಿತೇ ಪ್ರಿಯೇ ಪಿಕೋsಭೂದ್ವನಪ್ರಿಯ: ಸಪದಿ /
ಉಪಮಾಮುಪೈತು ಶಂಖ: ಕಂಠೇ ತಸ್ಮಿನ್ನಿಧಿತ್ವೇನ //
ಕನ್ನಡ ಅನುವಾದ
' ಪ್ರಿಯೇ! ಯಾವ ನಿನ್ನ ಕಂಠದ ಧ್ವನಿಯಿಂದ ಕೋಗಿಲೆಯು ಪರಾಜಿತಗೊಂಡು ಕೂಡಲೇ ವನಪ್ರಿಯವಾಯಿತು ( ವನಕ್ಕೆ ಹೊರಟುಹೋಯಿತು)! ಇನ್ನು ಶಂಖವಾದರೂ ಸೌಂದರ್ಯನಿಧಿಯ ಕಾರಣದಿಂದ ನಿನ್ನ ಕಂಠದೊಂದಿಗೆ ಉಪಮೆಯನ್ನು ಪಡೆದುಕೊಳ್ಳಲಿ!'
ಪ್ರಿಯೆಯ ಕಂಠದ ಧ್ವನಿಯನ್ನು ಕೋಗಿಲೆಗೆ ಹೋಲಿಸೋಣವೆಂದರೆ ಅದು ಸೋತು ವನಕ್ಕೆ ಹಾರಿಹೋಯಿತು! ಹಾಗಾಗಿ ಶಂಖವಾದರೂ ಅವಳ ಕಂಠದ ಸೌಂದರ್ಯನಿಧಿಗೆ ಸಮಾನವಾಗಿರುವುದರಿಂದ ಅದರೊಂದಿಗೆ ಉಪಮೆಯನ್ನು ಪಡೆದುಕೊಳ್ಳಲಿ ಎಂದು ಒಬ್ಬ ರಸಿಕನು ತನ್ನ ಪ್ರಿಯೆಗೆ ಹೇಳುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ