ಸೋಮವಾರ, ಏಪ್ರಿಲ್ 6, 2026

ಸುಂದರೀಶತಕ -೧೭

ಸಂಸ್ಕೃತ ಮೂಲ 

ಕರನಖಲಲಿತಭುಜಾಯಾ: ಪಲ್ಲವಕುಸುಮಾಭಿರಾಮಲತಿಕಾಯಾ: / 
ಅನಯೋರ್ವಿಶೇಷದರ್ಶೀ ಸುಂದರಿ ಕುಸುಮೇಷುರೇವೈಕ: //

ಕನ್ನಡ ಅನುವಾದ 

    ' ಎಲೈ ಸುಂದರಿ! ನಿನ್ನ ಕೈಗಳು ಹಾಗೂ ನಖಗಳುಳ್ಳ ಲಲಿತ ಭುಜಗಳ ಹಾಗೂ ಎಳೆ ಚಿಗುರುಗಳು ಹಾಗೂ ಪುಷ್ಪಗಳುಳ್ಳ ಮನೋಹರ ಲತೆಗಳ ನಡುವೆ ಇರುವ ವ್ಯತ್ಯಾಸವನ್ನು ಪುಷ್ಪಬಾಣನಾದ ಕಾಮದೇವನೊಬ್ಬನೇ ನೋಡಬಲ್ಲನು!' 
    ಸುಂದರಿಯ ಸುಂದರ ಕರನಖಗಳುಳ್ಳ ಲಲಿತಭುಜಗಳು ಹಾಗೂ ಪಲ್ಲವಪುಷ್ಪಗಳುಳ್ಳ ಮನೋಹರ ಲತೆಗಳು ಬಹಳಷ್ಟು ಸಾಮ್ಯತೆಗಳನ್ನು ಹೊಂದಿವೆ! ಇವುಗಳ ನಡುವಿನ ವಿಶೇಷ ಅಥವಾ ವ್ಯತ್ಯಾಸವನ್ನು ಕಾಮದೇವನೊಬ್ಬನೇ ಗಮನಿಸಬಲ್ಲ ಎಂದು ಕವಿಯು ಸುಂದರಿಯ ಸುಂದರ ತೋಳುಗಳನ್ನು ವರ್ಣಿಸುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ