ಬುಧವಾರ, ಜೂನ್ 3, 2026

ಸುಂದರೀಶತಕ -೪೫

ಸಂಸ್ಕೃತ ಮೂಲ 

ಕಾತರನಯನನಿವೇದಿತನಿರ್ದಯಕಂದರ್ಪವೇದನಾತಿಶಯಮ್/
ದೃಷ್ಟಂ ನಿಖಾತಮಂತ: ಪ್ರಿಯಯಾ ಪ್ರಸ್ಥಾನವೇಲಾಯಾಮ್//

ಕನ್ನಡ ಅನುವಾದ 

    ' ನಾನು ಪ್ರಯಾಣ ಹೊರಡುವ ಸಮಯದಲ್ಲಿ ನನ್ನ ಪ್ರಿಯತಮೆಯ ಕಾತರ ನಯನಗಳು ನಿವೇದಿಸಿದ ನಿರ್ದಯ ಕಾಮವೇದನೆಯ ಅತಿಶಯದ ನೋಟ ನನ್ನ ಹೃದಯಾಂತರಾಳದಲ್ಲಿ ಹೊಕ್ಕಿ ನೆಲೆಸಿದೆ!'
     ಪ್ರಿಯನು ಕಾರಣಾಂತರದಿಂದ ಪ್ರಯಾಣ ಹೊರಟಾಗ ಅವನ ಪ್ರಿಯತಮೆಗೆ ಆಗುವ ವಿರಹವೇದನೆ ಅಷ್ಟಿಷ್ಟಲ್ಲ! ಕಾಮದೇವನು ನಿರ್ದಯವಾಗಿ ಅವಳನ್ನು ಬಾಧಿಸುತ್ತಾನೆ! ಆದರೆ ಅವಳು ಅದನ್ನು ಯಾವ ಮಾತಿನಿಂದಲೂ ವ್ಯಕ್ತಪಡಿಸುವುದಿಲ್ಲ! ಕೇವಲ ತನ್ನ ಕಣ್ಣ ನೋಟದಿಂದಲೇ ತೋರಿಸುತ್ತಾಳೆ! ಅದು ಅವಳ ಪ್ರಿಯನ ಹೃದಯವನ್ನು ಬಾಣದಂತೆ ಹೊಕ್ಕು ಅಂತರಂಗದಲ್ಲಿ ನೆಲೆಸುತ್ತದೆ! ಅದನ್ನು ಅವನು ಮರೆಯಲು ಸಾಧ್ಯವೇ ಇಲ್ಲ! ಹಾಗಾಗಿ ಅವನು ಅನಂತರ ಅದನ್ನು ನೆನೆಯುತ್ತಿದ್ದಾನೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ