ಮಂಗಳವಾರ, ಜೂನ್ 23, 2026

ಸುಂದರೀಶತಕ -೫೪

ಸಂಸ್ಕೃತ ಮೂಲ 

ಅವಧಿದಿವಸಪ್ರಯಾಣಾ: ಪ್ರಿಯತಮ ತಸ್ಯಾ ಮೃಗೀದೃಶ: ಪ್ರಾಣಾ: /
ತಿಷ್ಠಂತಿ ಕತಿಪಯಾಹಂ ಕೃತ್ವಾ ಪ್ರಸ್ಥಾನಮಧಿಕಂಠಮ್ //

ಕನ್ನಡ ಅನುವಾದ 

    ದೂತಿಯು ನಾಯಕನಿಗೆ ಹೇಳುತ್ತಾಳೆ, ' ಓ ಪ್ರಿಯತಮ! ನಿನ್ನ ಪ್ರಯಾಣದ ಅವಧಿಯ ವಿಯೋಗದ ದಿನಗಳು ಮುಗಿಯುತ್ತಾ ಬಂದಿವೆ! ಆ ಮೃಗನಯನಿಯ ಪ್ರಾಣಗಳು ಕಂಠದವರೆಗೂ ಬಂದು ನಿನ್ನ ಮಿಲನವಾಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ!' 
    ಇಲ್ಲಿ ನಾಯಕನು ಪ್ರಯಾಣ ಹೋಗಿದ್ದಾನೆ. ಅವನ ಪ್ರಿಯತಮೆಯಾದ ನಾಯಿಕೆಯು ವಿರಹದಲ್ಲಿ ಬಳಲುತ್ತಿದ್ದಾಳೆ. ಅಂದಿನಿಂದಲೇ ಅವಳ ಪ್ರಾಣಗಳು ಹೋಗುವಂತಾಗಿವೆ. ಅವನ ಪ್ರಯಾಣದ ದಿನಗಳ ಅವಧಿ ಇನ್ನೇನು ಮುಗಿಯುತ್ತಾ ಬಂದಿದೆ. ಈ ಹೊತ್ತಿಗೆ ನಾಯಿಕೆಯ ಪ್ರಾಣಗಳು ಕಂಠದವರೆಗೂ ಬಂದಿವೆ ಹಾಗೂ ಇನ್ನೇನು ಹೋಗುವಂತಾಗಿವೆ!  ಅವನು ಬಂದರೆ, ಅವನ ಮಿಲನವಾಗುತ್ತಲೇ ಹೋಗಲೆಂದು ಇನ್ನು ಸ್ವಲ್ಪ ದಿನಗಳು ಉಳಿಯಲು ಪ್ರಯತ್ನ ಪಡುತ್ತಿವೆ. ಈ ವಿಷಯವನ್ನು ದೂತಿಯು ನಾಯಕನ ಬಳಿಗೆ ಹೋಗಿ ಹೇಳುತ್ತಿದ್ದಾಳೆ. ಇನ್ನು ಅವನು ಬಂದುಬಿಡಬೇಕೆಂದು ಅವಳ ಅಭಿಪ್ರಾಯ.
     ಇದು ಅತ್ಯಂತ ವಿರಹಾವಸ್ಥೆಯ ಒಂದು ಮನೋಜ್ಞ ಚಿತ್ರಣ. 
     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ