ಸೊಳ್ಳೆಗಳ ಬಗ್ಗೆ ಒಂದಿಷ್ಟು ಓದಿದ ನನಗೆ ಅವುಗಳ ಬಗ್ಗೆ ಬಹಳ ಕುತೂಹಲ ಮೂಡಿತು. ಆಗ ಕೋಣೆಯಲ್ಲಿ ಒಂದು ಸೊಳ್ಳೆ ಕುಳಿತಿದ್ದುದನ್ನು ನೋಡಿ ಉಪಾಯವಾಗಿ ಅದರ ಚಿತ್ರ ತೆಗೆದೆ. ನಾನು ಓದಿದ್ದನ್ನು ನೆನೆದು ನೋಡಿದಾಗ ಅದು ಗಂಡು ಸೊಳ್ಳೆ ಎಂದು ತಿಳಿಯಿತು! ಹೇಗೆ ಎನ್ನುವಿರಾ? ಗಂಡು ಸೊಳ್ಳೆಗೆ ಪೊದೆಯಂಥ ಮೀಸೆಗಳು ( ಆಂಟೆನಾಗಳು) ಇದ್ದರೆ, ಹೆಣ್ಣು ಸೊಳ್ಳೆಗೆ ತೆಳ್ಳನೆಯ ಕಡ್ಡಿಯಂಥ ಮೀಸೆಗಳಿರುತ್ತವೆ. ಹಾಗಾಗಿ, ಈ ಚಿತ್ರದಲ್ಲಿ ಇರುವುದು ಗಂಡು ಸೊಳ್ಳೆ. ಅಂದಹಾಗೆ, ನಮ್ಮನ್ನು ಕಚ್ಚಿ ರಕ್ತ ಕುಡಿಯುವುದು ಹೆಣ್ಣು ಸೊಳ್ಳೆ! ಗಂಡು ಸೊಳ್ಳೆ, ಸಸ್ಯಗಳ ರಸ ಹೀರಿ ಜೀವಿಸುತ್ತದೆ. ಸೊಳ್ಳೆಯ ಜುಂಯ್ಯನೆಯ ಶಬ್ದ ಬರುವುದು ಅದರ ರೆಕ್ಕೆಗಳ ಬಡಿತದಿಂದ. ಗಂಡು ಸೊಳ್ಳೆಯನ್ನು ಮಿಲನಕ್ಕೆ ಕರೆಯಲು ಹೆಣ್ಣು ಸೊಳ್ಳೆ ಈ ಶಬ್ದ ಮಾಡುತ್ತದೆ. ಗಂಡು ಸೊಳ್ಳೆ, ಈ ಶಬ್ದವನ್ನು ತನ್ನ ಮೀಸೆಗಳ ಮೂಲಕ ಕೇಳಿ ಹೆಣ್ಣಿನ ಬಳಿಗೆ ಮಿಲನಕ್ಕೆ ಬರುತ್ತದೆ. ಸೊಳ್ಳೆಯ ಜುಂಯ್ಯನೆಯ ಶಬ್ದ ನಮ್ಮ ಕಿವಿಯ ಬಳಿಯೇ ಏಕೆ ಬರುತ್ತದೆ? ಹೆಣ್ಣು ಸೊಳ್ಳೆಯು ನಾವು ಉಸಿರಿನಲ್ಲಿ ಬಿಡುವ ಇಂಗಾಲದ ಡೈಆಕ್ಸೈಡ್ ನಿಂದ ಆಗುವ ಉಷ್ಣತೆಗೆ ಆಕರ್ಷಣೆಗೊಂಡು ನಮ್ಮ ತಲೆ, ಮುಖಗಳ ಬಳಿ ಬಂದು ತನ್ನ ಮಿಲನಕ್ಕೆ ಅನುಕೂಲವಾಗಲು ನಮ್ಮನ್ನು ಕಚ್ಚಿ ರಕ್ತ ಹೀರುತ್ತದೆ. ಅದೇ ಸಮಯಕ್ಕೆ ಅದು ರೆಕ್ಕೆಗಳನ್ನು ಬಡಿದು ಶಬ್ದ ಮಾಡಿ ಗಂಡನ್ನು ಮಿಲನಕ್ಕೆ ಕರೆಯುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ